ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿಯರಿಗೆ ಸಂತೂರ್ ಸ್ಕಾಲರ್ಶಿಪ್.ಹಾಗೂ ರಿಲಯನ್ಸ್ ಪೌಡಿಶನ್ ಪದವಿಪೂರ್ವ ವಿದ್ಯಾರ್ಥಿ ವೇತನಗಳು

ಸ್ಕಾಲರ್ಶಿಪ್ :ಈಗಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ಅನ್ನುವಂತದ್ದು ತುಂಬಾ ಪ್ರಮುಖವಾಗಿದೆ ಏಕೆಂದರೆ ಆರ್ಥಿಕವಾಗಿ ಹಾಗೂ ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ಅವರ ಓದುವ ಕನಸುಗಳು ನನಸಾಗಿಸಿಕೊಳ್ಳಲು ವಿದ್ಯಾರ್ಥಿ ವೇತನ ತುಂಬಾ ಪ್ರಮುಖ ಭಾಗವಾಗಿರುತ್ತದೆ.

ದೇಶದಲ್ಲಿ ಅನೇಕ NGO ಹಾಗೂ ಸಂಘ-ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅನೇಕ ರೀತಿಯ ವಿದ್ಯಾರ್ಥಿ ವೇತನಗಳನ್ನು ನೀಡುವ ಗುರಿಯನ್ನು ಇಟ್ಟುಕೊಂಡಿದೆ ಹಾಗೆ 2024-25 ನೇ ಸಾಲಿನ ಉನ್ನತ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸಂತೂರ್ ಹಾಗೂ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನವನ್ನು ಘೋಷಣೆ ಮಾಡಿದೆ.

ಈ ಎರಡು ಸಂಸ್ಥೆಗಳ ವಿದ್ಯಾರ್ಥಿ ವೇತನಗಳು ವಿದ್ಯಾರ್ಥಿಗಳಿಗೆ ಅನೇಕ ರೀತಿಯಾಗಿ ಸಹಾಯವಾಗಲಿದೆ ಉದಾಹರಣೆ. ರಿಲಯನ್ಸ್ ಫೌಂಡೇಶನ್ ನೀಡುತ್ತಿರುವ ಸ್ಕಾಲರ್ಶಿಪ್ ನಲ್ಲಿ ಸುಮಾರು 5,000 ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವ ಗುರಿಯನ್ನು ರಿಲಯನ್ಸ್ ಫೌಂಡೇಶನ್ ಇಟ್ಟಿದೆ.

ಹಾಗೂ ಸಂತೂರ್ ಸ್ಕಾಲರ್ಶಿಪ್ ನಲ್ಲಿ ವಿದ್ಯಾರ್ಥಿನಿಯರಿಗೆ ಹೆಚ್ಚಾಗಿ ಯುವತಿಯರಿಗೆ ಸ್ಕಾಲರ್ಶಿಪ್ ನೀಡುವ ಗುರಿಯನ್ನು ಇಟ್ಟಿದ್ದಾರೆ ಇದರಿಂದ ಹಿಂದುಳಿದ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿನಿಯರಿಗೆ ಉಜ್ವಲ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಇಸ್ ಸ್ಕಾಲರ್ಶಿಪ್ ನೀಡುತ್ತಿದೆ ಈ ಲೇಖನದಲ್ಲಿ ಈ ಎರಡು ಸ್ಕಾಲರ್ಶಿಪ್ ಬಗ್ಗೆ ಮಾಹಿತಿಯನ್ನು ನೋಡೋಣ ಲೇಖನವನ್ನು ಪೂರ್ತಿಯಾಗಿ ಓದಿ.

ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿಯರಿಗೆ ಸಂತೂರ್ ಸ್ಕಾಲರ್ಶಿಪ್.
ಹಾಗೂ ರಿಲಯನ್ಸ್ ಪೌಡಿಶನ್ ಪದವಿಪೂರ್ವ ವಿದ್ಯಾರ್ಥಿ ವೇತನಗಳು.

ಸಂತೂರ್ ಸ್ಕಾಲರ್‌ಶಿಪ್ ಪ್ರೋಗ್ರಾಂ, 2016-17 ರಲ್ಲಿ ಪ್ರಾರಂಭವಾಯಿತು, ಇದು ವಿಪ್ರೋ ಕನ್ಸ್ಯೂಮರ್ ಕೇರ್ ಮತ್ತು ಲೈಟಿಂಗ್ ಗ್ರೂಪ್ (WCCLG) ಮತ್ತು ವಿಪ್ರೋ ಕೇರ್ಸ್‌ನ ಜಂಟಿ ಉಪಕ್ರಮವಾಗಿದೆ, ಇದು 12 ನೇ ತರಗತಿಯ ನಂತರ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಯುವತಿಯರನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿದೆ.

ವಾರ್ಷಿಕ ಪುನರಾವರ್ತಿತ ಕಾರ್ಯಕ್ರಮವು ಆಯ್ದ ವಿದ್ಯಾರ್ಥಿಗಳು ತಮ್ಮ ಪದವಿಪೂರ್ವ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವವರೆಗೆ ಬೆಂಬಲಿಸುತ್ತದೆ.

ಒದಗಿಸಿದ ಆರ್ಥಿಕ ಬೆಂಬಲವನ್ನು ಶಿಕ್ಷಣ ಮತ್ತು ಸಂಬಂಧಿತ ವೆಚ್ಚಗಳಿಗೆ ಬಳಸಿಕೊಳ್ಳಬಹುದು. ಪ್ರಸ್ತುತ, ಸಂತೂರ್ ವಿದ್ಯಾರ್ಥಿವೇತನ ಕಾರ್ಯಕ್ರಮವು ಆಂಧ್ರ ಪ್ರದೇಶ, ಛತ್ತೀಸ್‌ಗಢ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಲಭ್ಯವಿದೆ.

ಈ ವಿದ್ಯಾರ್ಥಿ ವೇತನ ಯುವತಿಯರಿಗಾಗಿ ಮಾತ್ರ

  • ಆಂಧ್ರ ಪ್ರದೇಶ ಕರ್ನಾಟಕ, ತೆಲಂಗಾಣ ಮತ್ತು ಛತ್ತಿನ್‌ಗಡದಲ್ಲಿ ಯುವತಿಯರಿಗೆ .

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು

ಸ್ಥಳೀಯ ಸರಕಾರಿ ಶಾಲೆಯಲ್ಲಿ 10ನೇ ತರಗತಿ ಓದಿರಬೇಕು

2023-24 ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆ ಅಥವಾ ಜೂನಿಯರ್ ಕಾಲೇಜಿನಿಂದ 12 ನೇ ತರಗತಿ ಉತ್ತೀರ್ಣರಾಗಿದ್ದಾರೆ.

2024-25 ರಿಂದ ಪ್ರಾರಂಭವಾಗುವ ಪೂರ್ಣ ಸಮಯದ ಪದವಿ ಕೋರ್ಸ್ ಗೆ ದಾಖಲಾಗಿರಬೇಕು.

•ಪೂರ್ಣ ಸಮಯದ ಪದವಿ ಕೋರ್ಸ್ ಕನಿಷ್ಠ 3 ವರ್ಷಗಳ ಅವಧಿಯನ್ನು ಹೊಂದಿರಬೇಕು.

  • ಕಲೆಗಳು ಮತ್ತು ವಿಜ್ಞಾನಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಲವಾದ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ಮಹತ್ವಾಕಾಂಕ್ಷೆಯ (ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಸಹ ಆದ್ಯತೆ ನೀಡಲಾಗುವುದು

ಪ್ರಯೋಜನಗಳು

ವಾರ್ಷಿಕ ವಿದ್ಯಾರ್ಥಿ ವೇತನ ಮೊತ್ತ 24,000

ಈ ವಿದ್ಯಾರ್ಥಿ ವೇತನದ ಗುರಿ .

ಹಿಂದುಳಿದ ಹಾಗೂ ಬಡ ಕುಟುಂಬದ ವಿದ್ಯಾರ್ಥಿಗಳ
ಬೋಧನಾ ಶುಲ್ಕಗಳು, ಹಾಸ್ಟೆಲ್ ಶುಲ್ಕಗಳು, ಮೆನ್ ಶುಲ್ಕಗಳು, ಪ್ರಯಾಣ ವೆಚ್ಚಗಳು, ಪುಸ್ತಕಗಳು, ಸ್ಟೇಷನರಿಗಳು, ಸಾಧನಗಳು, ಡೇಟಾ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಶಿಕ್ಷಣ-ಸಂಬಂಧಿತ ವೆಚ್ಚಗಳಿಗೆ ವಿದ್ಯಾರ್ಥಿವೇತನವನ್ನು ಬಳಸಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಪಾಸ್‌ಪೋರ್ಟ್ ಸೈಜ್ ಫೋಟೋ
  • ಕಾಲೇಜಿನ ಗುರುತಿನ ಚೀಟಿ
  • 12 ನೇ ತರಗತಿ ಮತ್ತು 10 ನೇ ತರಗತಿಯ ಅಂಕಪಟ್ಟಿಗಳು

ಗುರುತಿನ ಪುರಾವೆ (ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಯಾವುದೇ ಐಡಿ ಪುರಾವೆ)

ಹಾಗೂ ಆರ್ತಿದಾರರ ಬ್ಯಾಂಕ್ ಪಾಸ್ ಬುಕ್ ಫೋಟೋ ಅಥವಾ ಜೆರಾಕ್ಸ್

ಈ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನೀವು buddy4Study ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಖಾತೆಯನ್ನು ರಚಿಸಿ ನಂತರ ಅದರಲ್ಲಿ ಸಂತೂರ್ ಸ್ಕಾಲರ್ಶಿಪ್ 2024-25 ಗೆ ಅರ್ಜಿ ಸಲ್ಲಿಸಬಹುದು.

buddy4Study ಅಪ್ಲಿಕೇಶನ್ ಅನ್ನು ನೀವು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳ ಬಹುದು ಡೌನ್ಲೋಡ್ ಮಾಡಿಕೊಂಡು ನಿಮ್ಮ ಖಾತೆಯನ್ನು ರಚಿಸಿ ನಂತರ ನೀವು ಅದರಲ್ಲಿ ಸ್ಕಾಲರ್ಶಿಪ್ ಗಾಗಿ ಅಪ್ಲೈ ಮಾಡಬಹುದು.

buddy4Study ವೆಬ್ಸೈಟ್ ಅಥವಾ ಅಪ್ಪ್ ನಲ್ಲಿ ಬೇಕಾದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ನಿಯಮ ಸರತ್ವಗಳನ್ನು ಒಪ್ಪಿಕೊಂಡು ನಂತರ ನೀವು ಅರ್ಜಿ ಸಲ್ಲಿಸಿದರೆ ನಿಮಗೆ ನಂತರ ರಿಪ್ಲೈ ಬರುತ್ತದೆ.

ರಿಲಯನ್ಸ್ ಕಳೆದ 25 ವರ್ಷಗಳಿಂದ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಪ್ರೋತ್ಸಾಹ ಧನಗಳನ್ನು ನೀಡಿ ಶಿಕ್ಷಣಕ್ಕೆ ಹಾಗೂ ಅವರ ಮುಂದಿನ ಬದುಕಿನ ಗುರಿಗೆ ಬೆಂಬಲಿಸುತ್ತಾ ಬಂದಿದೆ ರಿಲಾಯನ್ಸ್ ಫೌಂಡೇಶನ್ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನವನ್ನು ರಿಲಯನ್ಸ್ ಫೌಂಡೇಶನ್ ಘೋಷಣೆ ಮಾಡಿದೆ, ಘೋಷಣೆ ಮಾಡಿ ಈಗಾಗಲೇ ಒಂದು ತಿಂಗಳು ಕಳೆದಿದೆ ಅಕ್ಟೋಬರ್ ಆರರ ತನಕ ಇರುತ್ತದೆ.

ಅರ್ಜಿ ಸಲ್ಲಿಸಲು ಬಯಸುವ ಅರ್ಹ ವಿದ್ಯಾರ್ಥಿಗಳು ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು.

2024-25 ನೇ ಸಾಲಿನ ದೇಶದಾದ್ಯಂತ ಸ್ನಾತಕೋತರ ಪದವಿ ಹಾಗೂ ಪದವಿ ಶಿಕ್ಷಣ ಮಾಡುತ್ತಿರುವ ಸುಮಾರು 5,100 ಅತ್ಯುತ್ತಮ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುವುದೆಂದು ರಿಲಯನ್ಸ್ ಫೌಂಡೇಶನ್ ಹೇಳಿದೆ.

ಈ ವಿದ್ಯಾರ್ಥಿ ವೇತನ ಪದವಿ ವಿದ್ಯಾರ್ಥಿಗಳಿಗೆ ಎರಡು ಲಕ್ಷ ಹಾಗೂ ಸ್ನಾತಕೋತರ ಪದವಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆರು ಲಕ್ಷದವರೆಗೆ ನೀಡಲಾಗುತ್ತದೆ ಎಂದು ಹೇಳಲಾಗಿದೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ನವಭಾರತ ನಿರ್ಮಾಣಕ್ಕಾಗಿ ವೃತ್ತಿ ಸಲಹೆಗಾಗಿ ಈ ವಿದ್ಯಾರ್ಥಿ ವೇತನ ನೀಡಲಾಗುವುದು.

ಈ ಸ್ಕಾಲರ್ ಶಿಪ್ ಗಾಗಿ ಅರ್ಜಿ ಸಲ್ಲಿಸಲು https://www.scholarships.reliancefoundation.org ವೆಬ್ ಸೈಟ್ ಗೆ ಭೇಟಿ ನೀಡಿ ಇಲ್ಲಿ ನ್ಯೂ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋ
ವಿಳಾಸ ಮಾಹಿತಿ
ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಅಂಕಪಟ್ಟಿ
ಆದಾಯ ಪ್ರಮಾಣ ಪತ್ರ

ಹಾಗೂ ಶಿಕ್ಷಣಕ್ಕೆ ಸಂಬಂಧಪಟ್ಟ ದಾಖಲೆಗಳು

ಅರ್ಲಿ ಸಲ್ಲಿಸಲು ಕೊನೆಯ ದಿನಾಂಕ /06/10/2024

ಸ್ನೇಹಿತರೆ ಈ ಎಲ್ಲಾ ವಿದ್ಯಾರ್ಥಿ ವೇತನಗಳನ್ನು ಬಳಸಿಕೊಳ್ಳಿ ಹಾಗೂ ನಿಮ್ಮ ಉನ್ನತ ಶಿಕ್ಷಣದ ಕನಸುಗಳನ್ನು ನನಸಾಗಿಸಿಕೊಳ್ಳಿ ಹಾಗೆ ಅರ್ಜಿಯನ್ನು ಸಲ್ಲಿಸುವಾಗ ಕೇಳಿರುವ ಮಾಹಿತಿಗಳನ್ನು ಸರಿಯಾಗಿ ಆಯ್ಕೆ ಮಾಡಿ ಹಾಗೂ ಸರಿಯಾದ ದಾಖಲೆಗಳನ್ನು ನೀಡಿ.

ನೀವು ಸರಿಯಾದ ದಾಖಲೆಗಳನ್ನು ನೀಡಿದರೆ ನಿಮ್ಮ ಸ್ಕಾಲರ್ಶಿಪ್ ನಿಮಗೆ ಸಿಗುತ್ತದೆ ಹಾಗೆ ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ಕೂಡ ಕಳುಹಿಸಿ ಅವರಿಗೂ ಕೂಡ ಸಹಾಯವಾಗುವ ಹಾಗೆ ಮಾಡಿ.

Leave a Comment

Your email address will not be published. Required fields are marked *

Scroll to Top